Friday, November 20, 2009

ಗೆಳೆಯ/ಗೆಳತಿಯರಿಗೆ ಹೃತ್ಪೂರ್ವಕ ಸ್ವಾಗತ.....



ನನ್ನದೇ ಆದ ವಿಚಾರಗಳನ್ನು ಮ೦ಡಿಸಲು ವೇದಿಕೆ ದೊರತದ್ದಕ್ಕೆ ನನಗೆ ಸಂತೋಷವಾಗುತ್ತಿದೆ.
ನನ್ನ ಮೆಚ್ಚಿನ ವಿಷಯ ರ೦ಗಭೂಮಿ ಹಾಗು ಅದರ ಬೆಳವಣಿಗೆ, ಹಾಗು ಯುವಕರಲ್ಲಿ ಅದರ ಬಗ್ಗೆ ಇರುವ ಕಾಳಜಿ.
ರ೦ಗಭೂಮಿ ಬೆಳೆಯುತ್ತಿದೆ.ನಿಜವಾಗಿಯು ಇದು ಹೆಮ್ಮೆ ಪಡುವ೦ತಹ ವಿಷಯ.
ಪ್ರಸ್ತುತ ಸಾಮಾಜಿಕ,ರಾಜಕೀಯ ಹಾಗು ಇತರೆ ವಿದ್ಯಮಾನಗಳನ್ನು ಹೇಗೆ ಈಗಿನ ರ೦ಗಭೂಮಿಗೆ ಅಳವಡಿಸಿಕೊಳ್ಳಬಹುದು.ಇದರ ವಿಚಾರವಾಗಿ ಹೊಸ ನಾಟಕಗಳು ಅವಶ್ಯಕವೆ, ಹೊಸ ರ೦ಗ ಪ್ರಯೋಗಗಳು ಹೇಗೆ ಅವಶ್ಯಕವಾಗಿವೆ,..ಇದರ ಬಗ್ಗೆ ನಾನು ಇಲ್ಲಿ ಚರ್ಚಿಸಬಯಸುತ್ತೇನೆ..
ನಿಜವಾಗಿಯು ಈಗ ಮಹತ್ತರವಾದ ರ೦ಗಪ್ರಯೋಗಗಳು ಆಗುತ್ತಿವೆಯೆ..?...ಇರುವ ಹಳೇ ನಾಟಕಗಳನ್ನು ಹೊರತುಪಡಿಸಿ ಮನುಷ್ಯರ ಭಾವನೆಗಳಿಗೆ ನೇರವಾಗಿ ತಾಗಬಲ್ಲ೦ತಹ ನಾಟಕಗಳು ತಯಾರುಗೊಳ್ಳುತ್ತಿದಿಯೆ ಅಥವಾ ಹೊಸ ನಾಟಕಗಳು ಬ೦ದಿವಿಯೇ..?..ಅನೀತಿ,ಅವ್ಯವಹಾರ,ಅಜ್ಞಾನಗಳನ್ನು ನೇರವಾಗಿ ಖ೦ಡೀಸುವ೦ತಹ ನಾಟಕಗಾರರು ಹೊಸ ನಾಟಕಗಳನ್ನು ಹೊರ ತರುವುದರಲ್ಲಿ ಕ್ರಿಯಾಶೀಲರಾಗಿದ್ದಾರೆಯೇ..?..ಪ್ರತಾಪ್ ಸಿ೦ಹರ೦ತಹ ಉತ್ತಮ ಬರಹಗಾರರು,ಬೆತ್ತಲೆ ಜಗತ್ತನ್ನು ವಿಜಯ ಕರ್ನಾಟಕದ ಅ೦ಕಣಕ್ಕೆ ಪರಿಚಯಿಸಿದ ಹಾಗೆ, ರ೦ಗಭೂಮಿಗೆ ಬೆತ್ತಲೆ ಜಗತ್ತನ್ನು ಪರಿಚಯಿಸಲು ಸಾಧ್ಯವಿಲ್ಲವೆ..??..ಇನ್ನು ಹತ್ತು ಹಲವು ವಿಚಾರಗಳನ್ನು ನಾನಿಲ್ಲಿ ಚರ್ಚಿಸಲು ಇಷ್ಟಪಡುತ್ತೇನೆ,.,ದಯವಿಟ್ಟು ನಿಮ್ಮ ಅಭಿಪ್ರಾಯ,ಟೀಕೆಗಳನ್ನು ಮ೦ಡಿಸಬೇಕೆ೦ದು ನನ್ನ ಸವಿನಯ ಪ್ರಾರ್ಥನೆ.

No comments: