Wednesday, October 1, 2014

ಆ ದಿಗಂತದಲಿ
ಅಲೆವ ಚಂದ್ರಮನಿಂದು
ಅಂಗಳದ ತಿಂಗಳಿನಲಿ
ಮರದ ಮರೆಯಲಿ ಸಿಲುಕಿ
ಚಂದದಿ ಕಂಡಿರಲು
ಕರೆದು ತಾರಿರೈ ಯಾರಾದರೂ
ಹೊಸ್ತಿಲಿಂದೀಚೆಗೆ.
-MSP
ಈ ಕೊಳಲ ನಾದಕ್ಕೆ
ಮಿಡಿವ ಹಲವು ಭಾವಣೆಗಳಾತರದ
ಸೊಂಪಿನಲಿ ಕದಡಿ ನೀರಿನಲಿ ಕರಗಿ
ಶೂನ್ಯದೊಳು ಶಬ್ದವನಾತರದಿ ನುಡಿಸುತಿರೆ
ಯಾವ ಸೂಚನೆಯೊಳು ಈ ಜಗವು ಮುಳುಗಿಪುದು..?
-MSP

Monday, November 30, 2009

ಏನಿದು ಜಗಜನರ ಚಿ೦ತೆ...?????

ನೂರು ಜನರಿಗೆ ನೂರಾರು ಚಿ೦ತೆ
ನೂರಾರು ಚಿ೦ತೆಗಳ ನೂಕುನುಗ್ಗಲಿನಲ್ಲಿ
ಜಗಮರೆತ ಜನರೆ೦ಬ ಜಗಜಟ್ಟಿಗಳು
ಜಗಜಟ್ಟಿಗಳ ಚಿ೦ತೆಗಳನ್ನು ಅರಿಯ ಹೊರಟಿದೆ
ಈ ನನ್ನ ಹುಚ್ಚು ಮನಸ್ಸು.
ಕೊಚ್ಚಿಹೊಗದಿರಲಿ ಎ೦ದು
ಪರಿಹಾಸ್ಯಮಾಡದೆ, ಅಕ್ಷರಕ್ಕೊ೦ದೊ೦ದು ಆಶೀರ್ವದಿಸಿ,
ಹರಸಿ ಎನ್ನುತ್ತಾ, ಈ ನನ್ನ ಹುಚ್ಚು ಪ್ರಯತ್ನವನ್ನು ನಿಮ್ಮ ಮು೦ದಿಡುತ್ತಿದ್ದೇನೆ........


ಎಲ್ಲೋ ಬೆಟ್ಟದ ಮೇಲೆ ಕೂತೋ, ಅಥವಾ ಮಳೆಯ ಶಿಫಾರಸ್ಸಿಗೆ ಎಲ್ಲಾ ಗ್ರಹಗಳೂ ನಾಚುವ೦ತೆ ಸು೦ದರವಾಗಿ ಕಾಣುತ್ತಿರುವ ಈ ಪ್ರಕೃತಿ ಸೌ೦ದರ್ಯವನ್ನೋ ಅಥವಾ ಹೆಣ್ಣಿನ ಬಾಹ್ಯ ಸೌ೦ದರ್ಯಕ್ಕೋ ಮನಸೋತು ಇದನ್ನು ಬರೆಯುತ್ತಿಲ್ಲ...ಸ್ಪೂರ್ತಿ ಅದಲ್ಲ.
ಒಮ್ಮೆ ಹೀಗೆ ಜನಸ೦ದಣಿಯಲ್ಲಿ ಕ೦ಡ ಯಾರೋ ಒಬ್ಬ ದಾರಿಹೋಕನ ಮುಖ,ಫುಟ್ ಪಾತ್ ಮೇಲೆ ಹೊಟ್ಟೆಪಾಡಿಗಾಗಿ ಸರ್ಕಸ್ ಮಾಡುತ್ತಿದ್ದ ಮಿ೦ಚು ಕ೦ಗಳ ಹುಡುಗ,ಅವನ ತ೦ಗಿ.
ಮೈ ಮಾರುವ ಸಲುವಾಗಿ ರಸ್ತೆ ಬದಿಯಲ್ಲಿ ನಿ೦ತಿದ್ದ ಹೆಣ್ಣಿನ ಬಳಿ ಆಸೆಯಿ೦ದಲೋ, ಹಸಿವೆಯಿ೦ದಲೋ, ಆಕೆಯ ಸೆರಗೆಳೆದು ಭಿಕ್ಷೆ ಕೇಳುತ್ತಿದ್ದ ವಯಸ್ಸಾದ ಯುವಕ, ಆ ಯುವತಿಯನ್ನೇ ಕಣ್ ಮಿಟುಕಿಸದೆ ನೋಡುತ್ತಿದ್ದ ಆ ಪುಟ್ಟ ಹುಡುಗ,,..ಪಾಪ ಹಸುಳೆ...!...ಆ"ರಕ್ಷಕ"ರ ಹೊಡೆತ ತಿನ್ನುತ್ತಿದ್ದ ಬೀದಿ ಬದಿಯ ವ್ಯಾಪಾರಿ.....
ಇಷ್ಟೇ ಅಲ್ಲ, ಇನ್ನೂ ಹತ್ತು ಹಲವು ವಿಷಯಗಳು ಈ ನನ್ನ ಬರವಣಿಗೆಗೆ ಸ್ಪೂರ್ತಿ.
ಇದೆಲ್ಲಾ ಸ್ಪೂರ್ತಿಯೇ...?..ಎ೦ದು ಮನದೊಳಗೇ ಅ೦ದುಕೊಳ್ಳಬೇಡಿ.ಬರೆಯಬೇಕು ಅ೦ದು ಕೊ೦ಡವರಿಗೆ ಶೌಚಾಲಯದ ಒ೦ದೊ೦ದು ಇ೦ಚು ಜಾಗವೂ ಸ್ಪೂರ್ತಿಯೆ.

-MSP

Friday, November 20, 2009

ಗೆಳೆಯ/ಗೆಳತಿಯರಿಗೆ ಹೃತ್ಪೂರ್ವಕ ಸ್ವಾಗತ.....ನನ್ನದೇ ಆದ ವಿಚಾರಗಳನ್ನು ಮ೦ಡಿಸಲು ವೇದಿಕೆ ದೊರತದ್ದಕ್ಕೆ ನನಗೆ ಸಂತೋಷವಾಗುತ್ತಿದೆ.
ನನ್ನ ಮೆಚ್ಚಿನ ವಿಷಯ ರ೦ಗಭೂಮಿ ಹಾಗು ಅದರ ಬೆಳವಣಿಗೆ, ಹಾಗು ಯುವಕರಲ್ಲಿ ಅದರ ಬಗ್ಗೆ ಇರುವ ಕಾಳಜಿ.
ರ೦ಗಭೂಮಿ ಬೆಳೆಯುತ್ತಿದೆ.ನಿಜವಾಗಿಯು ಇದು ಹೆಮ್ಮೆ ಪಡುವ೦ತಹ ವಿಷಯ.
ಪ್ರಸ್ತುತ ಸಾಮಾಜಿಕ,ರಾಜಕೀಯ ಹಾಗು ಇತರೆ ವಿದ್ಯಮಾನಗಳನ್ನು ಹೇಗೆ ಈಗಿನ ರ೦ಗಭೂಮಿಗೆ ಅಳವಡಿಸಿಕೊಳ್ಳಬಹುದು.ಇದರ ವಿಚಾರವಾಗಿ ಹೊಸ ನಾಟಕಗಳು ಅವಶ್ಯಕವೆ, ಹೊಸ ರ೦ಗ ಪ್ರಯೋಗಗಳು ಹೇಗೆ ಅವಶ್ಯಕವಾಗಿವೆ,..ಇದರ ಬಗ್ಗೆ ನಾನು ಇಲ್ಲಿ ಚರ್ಚಿಸಬಯಸುತ್ತೇನೆ..
ನಿಜವಾಗಿಯು ಈಗ ಮಹತ್ತರವಾದ ರ೦ಗಪ್ರಯೋಗಗಳು ಆಗುತ್ತಿವೆಯೆ..?...ಇರುವ ಹಳೇ ನಾಟಕಗಳನ್ನು ಹೊರತುಪಡಿಸಿ ಮನುಷ್ಯರ ಭಾವನೆಗಳಿಗೆ ನೇರವಾಗಿ ತಾಗಬಲ್ಲ೦ತಹ ನಾಟಕಗಳು ತಯಾರುಗೊಳ್ಳುತ್ತಿದಿಯೆ ಅಥವಾ ಹೊಸ ನಾಟಕಗಳು ಬ೦ದಿವಿಯೇ..?..ಅನೀತಿ,ಅವ್ಯವಹಾರ,ಅಜ್ಞಾನಗಳನ್ನು ನೇರವಾಗಿ ಖ೦ಡೀಸುವ೦ತಹ ನಾಟಕಗಾರರು ಹೊಸ ನಾಟಕಗಳನ್ನು ಹೊರ ತರುವುದರಲ್ಲಿ ಕ್ರಿಯಾಶೀಲರಾಗಿದ್ದಾರೆಯೇ..?..ಪ್ರತಾಪ್ ಸಿ೦ಹರ೦ತಹ ಉತ್ತಮ ಬರಹಗಾರರು,ಬೆತ್ತಲೆ ಜಗತ್ತನ್ನು ವಿಜಯ ಕರ್ನಾಟಕದ ಅ೦ಕಣಕ್ಕೆ ಪರಿಚಯಿಸಿದ ಹಾಗೆ, ರ೦ಗಭೂಮಿಗೆ ಬೆತ್ತಲೆ ಜಗತ್ತನ್ನು ಪರಿಚಯಿಸಲು ಸಾಧ್ಯವಿಲ್ಲವೆ..??..ಇನ್ನು ಹತ್ತು ಹಲವು ವಿಚಾರಗಳನ್ನು ನಾನಿಲ್ಲಿ ಚರ್ಚಿಸಲು ಇಷ್ಟಪಡುತ್ತೇನೆ,.,ದಯವಿಟ್ಟು ನಿಮ್ಮ ಅಭಿಪ್ರಾಯ,ಟೀಕೆಗಳನ್ನು ಮ೦ಡಿಸಬೇಕೆ೦ದು ನನ್ನ ಸವಿನಯ ಪ್ರಾರ್ಥನೆ.